(Importance of Standards-based education)

ಮಾನದಂಡಗಳು ಎಂದರೇನು? (What are standards? )

ಶೈಕ್ಷಣಿಕ ಮಾನದಂಡಗಳು ಶಿಕ್ಷಣದಲ್ಲಿ ಗುಣಮಟ್ಟ ಮತ್ತು ಶ್ರೇಷ್ಠತೆಯನ್ನು ಅಳವಡಿಸಿಕೊಳ್ಳಲು ಉಪಯೋಗಿಸುವ ಸಾಧನಗಳಾಗಿವೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದ ನಿರ್ಣಾಯಕ ಹಂತಗಳಲ್ಲಿ ಹೊಂದಿರಬೇಕಾದ ಜ್ಞಾನ ಮತ್ತು ಕೌಶಲ್ಯಗಳನ್ನು ವ್ಯಾಖ್ಯಾನಿಸುವ ಸಾಧನಗಳೇ ಮಾನದಂಡಗಳು. ಈ ಮಾನದಂಡಗಳು ವಿದ್ಯಾರ್ಥಿಯು ನಿಖರವಾಗಿ ಮುಟ್ಟಬೇಕಾದ ಗುರಿಯನ್ನು ತಿಳಿಸುತ್ತವೆ. ಮಾನದಂಡಗಳ ಆಧಾರಿತ ಶಿಕ್ಷಣವು ಬೋಧನೆ ಮತ್ತು ಕಲಿಕೆಯ ಒಂದು ವ್ಯವಸ್ಥೆಯಾಗಿದ್ದು ಅದು ಬೋಧನೆ, ಮೌಲ್ಯಮಾಪನ, ಶ್ರೇಣೀಕರಣ ಮತ್ತು ವಿದ್ಯಾರ್ಥಿಯ ಶಾಲಾ ಶಿಕ್ಷಣದ ಉದ್ದಕ್ಕೂ ವರದಿ ಮಾಡುವುದು ಸೇರಿದಂತೆ ಶೈಕ್ಷಣಿಕ ಅನುಭವದ ಎಲ್ಲಾ ಅಂಶಗಳನ್ನು ಕೇಂದ್ರೀಕರಿಸುತ್ತದೆ.  ಈ ಮಾನದಂಡಗಳನ್ನು ಫಲಿತಾಂಶ ಆಧಾರಿತ ಶಿಕ್ಷಣ ಎಂದೂ ಸಹ ಕರಿಯುತ್ತಾರೆ.

ಮಾನದಂಡಗಳ ಆಧಾರಿತ ಶಿಕ್ಷಣ ಏಕೆ ಅವಶ್ಯಕ? (Need for Standards based education)

ಇಂದು ಪ್ರಪಂಚದಾದ್ಯಂತ ಮಾದಂಡಗಳ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ಕೊಡುತ್ತಿದ್ದಾರೆ.  ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಒಂದಲ್ಲ ಒಂದು ಗುರಿಯನ್ನು ಇಟ್ಟುಕೊಂಡಿರುತ್ತಾನೆ. ಆ ಗುರಿಯನ್ನು ಒಮ್ಮೆಲೆ ಮುಟ್ಟಲು ಸಾಧ್ಯವಿಲ್ಲ. ಹಂತ ಹಂತವಾಗಿ ವಿದ್ಯಾರ್ಥಿಯು ತಾನು ಅಂದುಕೊಂಡ ಗುರಿಯನ್ನು ಮುಟ್ಟಬೇಕು. ಹಂತ ಹಂತವಾಗಿ  ಗುರಿಯನ್ನು ಮುಟ್ಟಲು ಸಾಧನೆ ಮಾಡಬೇಕೆಂದರೆ ವಿದ್ಯಾರ್ಥಿಯ ಪ್ರತಿ ತರಗತಿಯಲ್ಲಿಯೂ ಸಹ ಮಾನದಂಡಗಳ ಅವಶ್ಯಕತೆ ಇರುತ್ತದೆ. ಆ ತರಗತಿಯಲ್ಲಿ ಪ್ರತಿಯೊಂದು ವಿಷಯಕ್ಕೂ ಕೌಶಲ್ಯಾಧಾರಿತ ಮಾನದಂಡಗಳನ್ನು ರೂಪಿಸಿದ್ದರೆ, ವಿದ್ಯಾರ್ಥಿಗಳು ಆ ಮಾನದಂಡಗಳನ್ನು ಓದಿಕೊಂಡು ಪ್ರಸ್ತುತ ಶೈಕ್ಷಣಿಕ ವರ್ಷ ಯಾವ ಯಾವ ಕೌಶಲ್ಯಗಳನ್ನು ತಾನು ಅಳವಡಿಸಿಕೊಳ್ಳಬೇಕು, ಮತ್ತು ಯಾವೆಲ್ಲಾ ಅಂಶಗಳನ್ನು ಕಲಿಯಬೇಕು ಎಂಬುದನ್ನು ನಿರ್ಧರಿಸಿಕೊಂಡು ಕಲಿಕೆಗೆ ಮುಂದಾಗಲು ಸಹಾಯಕವಾಗುತ್ತವೆ. ಇಂದು, ನಾಳೆ ಮತ್ತು ಮುಂದಿನ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ 21ನೇ ಶತಮಾನದ ಕಲಿಕೆಯ ಅವಕಾಶಗಳಿಗೆ ಗುಣಮಟ್ಟ ಆಧಾರಿತ ಕಲಿಕೆಗೆ ಅಡಿಪಾಯವನ್ನು ಒದಗಿಸಲು ಮಾನದಂಡಗಳು ತುಂಬಾ ಅವಶ್ಯಕ. ಉನ್ನತ ಮಟ್ಟದ ಸವಾಲು ಮತ್ತು ಕಠಿಣತೆಯನ್ನು ಒದಗಿಸುವುದರ ಜೊತೆಗೆ ವಿದ್ಯಾರ್ಥಿಗಳು ಕಲಿತದ್ದನ್ನು ಆಧರಿಸಿ ಮೌಲ್ಯಮಾಪನ ಮಾಡಲು ನ್ಯಾಯೋಚಿತ ಮತ್ತು ವಸ್ತುನಿಷ್ಠ ಮಾರ್ಗವನ್ನು ಒದಗಿಸುತ್ತದೆ. ಶಿಕ್ಷಕರು ಬೋಧನೆಗಾಗಿ ಸಿದ್ಧಗೊಳ್ಳಲು ಮತ್ತು ವಿದ್ಯಾರ್ಥಿಗಳ ಕಲಿಕಾ ಫಲಿತಾಂಶ ಸೂಕ್ತವಾದ ರೀತಿಯಲ್ಲಿ ಹೊರ ಹೊಮ್ಮಿಸಲು ಇದು ಪ್ರಬಲ ಅಸ್ತ್ರವಾಗಿದೆ.

ಏಕ್ಯಾ ಮತ್ತು ಸಿಎಂಆರ್ ಮಾನದಂಡಗಳು (Using standards at Ekya and CMR NPS)

ನಮ್ಮ ಸಂಸ್ಥೆಯು ಪ್ರಪಂಚದ ಪ್ರಸಿದ್ಧ ಮಾನದಂಡಗಳನ್ನು ಓದಿ, ವಿಮರ್ಶಿಸಿ ನಮ್ಮ ದೇಶಕ್ಕೆ, ನಮ್ಮ ಸಂಸ್ಕೃತಿಗೆ, ನಮ್ಮ ಭೌಗೋಳಿಕತೆಗೆ ಅನ್ವಯವಾಗುವಂತಹ ಮಾನಡಂಡಗಳನ್ನು ತೆಗೆದುಕೊಂಡು ಅಳವಡಿಸಿಕೊಳ್ಳುವುದರ ಜೊತೆಗೆ ನಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮದೇ ಆದ ಕೆಲವು ಮಾನದಂಡಗಳನ್ನು ಸಹ ರೂಪಿಸಿಕೊಂಡಿದ್ದೇವೆ. ವಿದ್ಯಾರ್ಥಿಗಳ ಕಲಿಕೆ, ಮೌಲ್ಯಮಾಪನಗಳು ಈ ಮಾನದಂಡಗಳ ಆಧಾರಿತವಾಗಿಯೇ ನಡೆಯುತ್ತದೆ. ಪ್ರತಿಯೊಂದು ವಿಷಯದ ಪ್ರತಿಯೊಂದು ಗದ್ಯಕ್ಕೂ ಆಯ್ಕೆಮಾಡಲಾಗಿರುವ ಮಾನದಂಡಗಳಿಗನುಗುಣವಾಗಿ ಕಲಿಕಾ ಚಟುವಟಿಕೆಗಳನ್ನು ರೂಪಿಸಿಕೊಂಡು ನಂತರ ಆ ಗದ್ಯಕ್ಕೆ ಪಾಠಯೋಜನೆಯನ್ನು ರೂಪಿಸಲಾಗುತ್ತದೆ. ಶಿಕ್ಷಕರು ಈ ಪಾಠಯೋಜನೆಯನ್ನು ಓದಿ ಅಣುಯೋಜನೆಯನ್ನು ರೂಪಿಸಿಕೊಳ್ಳುತ್ತಾರೆ. ಪ್ರತಿ ತರಗತಿಗೂ ಸಹ ಮಾನದಂಡಗಳನ್ನು ಇಟ್ಟುಕೊಂಡು ಶಿಕ್ಷಕರು ಅಣುಯೋಜನೆಯನ್ನು ಸಿದ್ಧಪಡಿಸುತ್ತಾರೆ. ನಮ್ಮ ಶಾಲೆಯ ಪ್ರತಿ ತರಗತಿಗಳೂ ಸಹ ಮಾನದಂಡಗಳಿಗೆ ಅನುಗುಣವಾಗಿಯೇ ನಡೆಯುತ್ತವೆ. ನಾವು ಮಾನದಂಡಗಳನ್ನು ಹಾಗು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯವನ್ನು ಆಧಾರವಾಗಿಟ್ಟುಕೊಂಡು ಎಲ್ಲಾ ತರಗತಿಗಳ ವಿಷಯಗಳ ಕಾಠಿಣ್ಯತೆಯನ್ನು ನಿರ್ಧರಿಸಿ, ಎಲ್ಲಾ ತರಗತಿಗಳ ವಿಷಯಗಳು ಹಂತ ಹಂತವಾಗಿ ಪ್ರಗತಿಯತ್ತ ಹೋಗುವ ಹಾಗೆ ನಮ್ಮ ಯೋಜನೆಯನ್ನು ರೂಪಿಸಿದ್ದೇವೆ. ಈ ಯೋಜನೆಯು ನಮಗೆ ಯಾವ ತರಗತಿಗೆ ಎಷ್ಟು ಕಠಿಣತೆ ಇರಬೇಕು ಎಂದು ತೋರಿಸುವುದರ ಜೊತೆಗೆ ಆಯಾಯ ತರಗತಿಗಳಿಗೆ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ ಎಷ್ಟು ಬೋಧಿಸಬೇಕು ಎಂಬುದನ್ನು ಸಹ ತಿಳಿಸುತ್ತದೆ. ಇದರಿಂದ ವಿದ್ಯಾರ್ಥಿಯ ಶೈಕ್ಷಣಿಕ ಹಾದಿ ಹಂತ ಹಂತವಾಗಿ ಪ್ರಗತಿಯತ್ತ ಹೋಗುತ್ತದೆ.

Posted by Ekya

Leave a reply

Your email address will not be published. Required fields are marked *